Friday, January 2, 2009

ಅಮ್ಮ

ಆ ಮಮತೆ, ಆ ಮಮಕಾರ

ಸಿಕ್ಕರೆ ಸಾಕು ಬಾಳು ಸಾರ್ಥಕ.

ಹಣ, ಆಸ್ತಿ, ಕೀರ್ತಿ, ಏನಿದ್ದರೇನು?

ಅವಳಿಲ್ಲದ ಬಾಳು ನಿರರ್ಥಕ.

ನವಮಾಸ ಹೊತ್ತು, ಆಮೇಲೆ

ಹೆತ್ತು, ನಮ್ಮನು ಬೆಳೆಸಿದಳಲ್ಲಾ

ನಮ್ಮ ಸುಖ, ಸಂತೋಷ ನೆಮ್ಮದಿ-

-ಯಲೇ ತನ್ನ ಸುಖವೆಂದು ಬಾಲಿದಳಲ್ಲಾ

ಧರೆ, ತಿರು-ತಿರುಗಿದ ಹಾಗೆ

ಏರು ನಮಗೆ, ಪಾಪ!

ಇಳಿಗಾಲದಲ್ಲಿದ್ದರೂ, ನಾವು ನಿಷ್ಠುರ

ಮಾಡಿದರೂ, ಹಾಕಲು ಶಾಪ.

ಕಾಣದ ದೇವರಿಗೆ ಮುಗಿ-

-ಮುಗಿದು ಕೈಯ,

ಏನೇನೋ ಬೇಡಿ, ಸೇವೆ ಮಾಡಿದೆವಲ್ಲಾ ತಮ್ಮಾ.

ಪೂಜೆಗೆ ಇವಳೇ ಅರ್ಹಳು

ಕಾಣದ ದೇವರಿಗಿಂತ ಹೆಚ್ಚಲ್ಲವೇನೋ ಅಮ್ಮ? !!!

--------------------------------------------

ರಾಖೇಶ್ ಹೆಗಡೆ

2 comments:

  1. ಕೊನೆಯ ಸಾಲುಗಳು ಇಷ್ಟವಾದವು ರಾಕೇಶ್. ಚೆನ್ನಾಗಿ ಬರ್ದಿದ್ದೀರಿ. ವೆಲ್ ಕಮ್ ಟು ಬ್ಲಾಗಿಂಗ್ :) ಇನ್ನಷ್ಟು ಚೆನ್ನಾಗಿ ಬರೀರಿ.

    ReplyDelete
  2. thanks Hema
    i know i am not yet a poet
    i am trying tobe a POET
    so i keep on try to become perfect

    ReplyDelete